About Us

|| ಕೆಂಚಯ್ಯನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ||

ಕ್ಷೇತ್ರ ಪರಿಚಯ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರರ ಸಂಕ್ಷಿಪ್ತ ವಿವರಣೆ

ಉಡುಪಿ ತಾಲೂಕು ಮೂಡುತೋನ್ಸೆ ಗ್ರಾಮದ ಕಲ್ಯಾಣ್ ಪುರದಲ್ಲಿರುವ ಕೆಂಚಯ್ಯ ನ ಶ್ರೀ ಮಾಲಿಂಗೇಶ್ವರ ದೇವಸ್ಥಾನ ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಕೋಟೆ ರಾಮಕ್ಷತ್ರಿಯ ರಿಂದ ಸ್ಥಾಪಿಸಲ್ಪಟ್ಟು ಪೂಜೆ ಸಲ್ಲಿಸುತ್ತಾ ಬಂದಿರುವ ದೇವಸ್ಥಾನವಾಗಿರುತ್ತದೆ. ಹದಿನಾಲ್ಕನೇ ಶತಮಾನದಲ್ಲಿ ಉದ್ಯಾವರವನ್ನು ಆಳುತ್ತಿದ್ದ ಅಳುಪರ ಕಾಲದಲ್ಲಿ ಇದರ ಪುನರ್ ನಿರ್ಮಾಣವಾಗಿದ್ದು, ರಾಜಾಶ್ರಯ ಹೊಂದಿದ್ದ ಈ ದೇವಾಲಯವು ಅತ್ಯಂತ ವೈಭವಯುತವಾಗಿ ಕೂಡಿದ್ದು ಚಿನ್ನದ ಪಲ್ಲಕ್ಕಿ, ಉತ್ಸವ ಮೂರ್ತಿ, ಧ್ವಜಸ್ತಂಭ ಇತ್ಯಾದಿಗಳಿದ್ದ ಕ್ಷೇತ್ರವೇ ಆಗಿತ್ತು. ತರುವಾಯ ವೈಷ್ಣವ ಧರ್ಮ, ಜೈನಧರ್ಮ ಕಾಲದಲ್ಲಿ ಕಡೆಗಣಿಸಲ್ಪಟ್ಟು ಶಿಥಿಲಗೊಂಡಾಗ ಪುನಃ ಬಾರಕೂರನ್ನು ಆಳುತ್ತಿದ್ದ ವೀರಶೈವ ಕಾಲದಲ್ಲಿ ಜೀರ್ಣೋದ್ಧಾರ ಗೊಂಡಿತ್ತೆಂದು ಕೆಳದಿ ಅರಸ ಬಸಪ್ಪ ನಾಯಕ 1948 ರ ಫೆಬ್ರವರಿ 24ನೇ ಶುಕ್ರವಾರ ಬರೆಯಲ್ಪಟ್ಟ ಸನದಿನ ಪ್ರಕಾರ ತಿಳಿದುಬರುತ್ತದೆ. ಆ ಸನದಿನ ಮೇರೆಗೆ ತೋನ್ಸೆ ಗ್ರಾಮದ ಉತ್ಪತ್ತಿಯನ್ನು ಉಂಬಳಿಯಾಗಿ ಬಿಟ್ಟುಕೊಟ್ಟಿದ್ದಾರೆಂದು ತಿಳಿದು ಬರುತ್ತದೆ.

ಮುಂದೆ ಈ ದೇಗುಲಕ್ಕೆ ಬಿಟ್ಟ ಚರಸ್ಥಿರ ಸೊತ್ತುಗಳ ಆದಾಯ ಕಡಿಮೆಯಾಗಿ ದೇವಾಲಯವು ಪುನಃ ಜೀರ್ಣಾವಸ್ಥೆಗೆ ಬಂದಾಗ ದಿವಂಗತ ನಾರಾಯಣ ಸೇರ್ವೆಗಾರರು ಆನುವಂಶಿಕ ಆಡಳಿತ ಮೊಕ್ತೇಸರರಾಗಿ (1891 ರಿಂದ 1932ರವರೆಗೆ) ಅಧಿಕಾರ ವಹಿಸಿಕೊಂಡು ಭಕ್ತರ ಸಹಕಾರದಿಂದ ಈ ದೇವಳದ ಗರ್ಭಗುಡಿ, ಪೌಳಿ, ಪ್ರಕಾರಾದಿಗಳನ್ನು ಪುನರ್ ನಿರ್ಮಿಸಿ ಶ್ರೀ ದೇವರ ಅಷ್ಠಬಂಧ ಬ್ರಹ್ಮಕಲಶ ಮೊದಲಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ನಿಯಮಬದ್ಧ ಪೂಜಾದಿ ಕೈಂಕರ್ಯಗಳಿಗೆ ಅರ್ಚಕರನ್ನು ನೇಮಿಸಿ ದೇವಳದ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮುಂದುವರಿಸಿದರು.

ಅವರ ಕಾಲಾನಂತರ ಅವರ ಹಿರಿಯ ಪುತ್ರ ದಿ। ಲಕ್ಷ್ಮಣಯ್ಯನವರು (೧೯೩೨ ರಿಂದ ೧೯೪೬ ರವರೆಗೆ) ಆಡಳಿತವನ್ನು ವಹಿಸಿಕೊಂಡರು. ಅವರ ಕಾಲದಲ್ಲಿ ಶೃಂಗೇರಿ ಜಗದ್ಗುರುಗಳನ್ನು ದೇವಸ್ಥಾನಕ್ಕೆ ಬರಮಾಡಿಸಿಕೊಂಡು ಸ್ವಜಾತಿ ಸಮ್ಮೇಳನವನ್ನು ಏರ್ಪಡಿಸಿದರು. ಈ ಸಮ್ಮೇಳನಕ್ಕೆ ಉತ್ತರಕನ್ನಡದಿಂದ ಕಾಸರಗೋಡಿನವರೆಗೆ ಸ್ವಜಾತಿ ಪ್ರತಿನಿಧಿಗಳನ್ನು ಆಹ್ವಾನಿಸಿ, ಅವರ ಶ್ರೇಯೋಭಿವೃದ್ಧಿಗೆ ಶ್ರೀಗುರುಗಳಿಂದ ಅನುಗ್ರಹವನ್ನು ಪಡೆದುಕೊಂಡಿರುತ್ತಾರೆ. ಶ್ರೀಯುತರ ಆಡಳಿತಾವಧಿಯಲ್ಲಿ ಶಿವರಾತ್ರಿಯಂದು ಸಂಜೆ ಘಂಟೆ ೬:೦೦ ರಿಂದ ಮರುದಿನ ಪ್ರಾತಃಕಾಲ 6:00 ಘಂಟೆ ವರೆಗೆ ಭಜನೆ ಮಾಡಿ ಮಂಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದನ್ನು ವೀಕ್ಷಿಸಿದ ದಿವಂಗತ ಬಾಲಯ್ಯನವರು ದಿ। ಲಕ್ಷ್ಮಯ್ಯನವರನ್ನು ಕೇಳಿಕೊಂಡ ಮೇರೆಗೆ ಶ್ರೀರಾಮ ಭಜನಾ ಮಂದಿರವನ್ನು ಸ್ಥಾಪಿಸಲು ಕಾರಣರಾದರು. ಅಂದು ಅವರು ಸ್ಥಾಪಿಸಿದ ಶ್ರೀರಾಮ ಭಜನಾ ಮಂದಿರವು ಇಂದಿಗೂ ಬಾಲಯ್ಯ ನವರ ಸಂತತಿಯವರಿಂದ ಶನಿವಾರ ಭಜನೆ, ಶಿವರಾತ್ರಿ ಏಕಾಹ ಭಜನೆ, ರಾಮನವಮಿ ಭಜನಾ ಕಾರ್ಯಕ್ರಮಗಳಿಂದ ಮುಂದುವರೆಯುತ್ತಿದೆ. ಅದೇ ರೀತಿಯಲ್ಲಿ ವಾರ್ಷಿಕ ಗಣೇಶ ಚತುರ್ಥಿಯಂದು ಗಣೇಶ ವಿಗ್ರಹವಿಟ್ಟು ಉಪ್ಪುರು ಸುಭಾಶ್ ರಾವ್ ಅವರ ಕುಟುಂಬದವರು ಪೂಜೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಲಕ್ಷ್ಮಯ್ಯನವರ ಕಾಲಾನಂತರ ಅವರ ಸಹೋದರ ಸುಬ್ಬಣ್ಣಯ್ಯನವರು (೧೯೪೬ ರಿಂದ ೧೯೫೧ ರ ವರೆಗೆ) ಅಧಿಕಾರವನ್ನು ವಹಿಸಿಕೊಂಡರು. ಅವರ ಕಾಲದಲ್ಲಿ ಅರ್ಚಕರ ವಾಸ್ತವ್ಯಕ್ಕೆ ಬೇರೆ ವಸತಿಗೃಹವನ್ನು ಮತ್ತು ಅರ್ಚಕರಿಗೆ ಪ್ರತ್ಯೇಕ ಬಾವಿಯನ್ನು ನಿರ್ಮಿಸಿದರು ದಿ। ಸುಬ್ಬಣ್ಣಯ್ಯನವರ ಕಾಲಾನಂತರ ಅವರ ಸಹೋದರ ದಿ। ನಾಗಪ್ಪಯ್ಯ ದೇವಳದ ಮತ್ತು ಪೌಳಿಯ ಮಾಡಿನ ಹಂಚು ಬದಲಾಯಿಸಿ ದೇವಳಕ್ಕೆ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿಸಿದರು ಮತ್ತು ದೇವಳದ ಎದುರಿನ ಬಾವಿಯನ್ನು ದುರಸ್ಥಿ ಮಾಡಿಸಿದರು. ಈ ಎಲ್ಲಾ ಕೆಲಸಗಳಿಗೆ ಅವರ ಸಹೋದರಳಿಯ ನಿವೃತ್ತ ಪೋಸ್ಟ್ ಮಾಸ್ಟರ್ ದಿ। ಜಿ. ಲಕ್ಷ್ಮಯ್ಯನವರ ಸಹಕಾರ ಮತ್ತು ದಾನಿಗಳ ಸಹಕಾರದಿಂದ ಮಾಡಿಸಿದರು. ಅಲ್ಲದೆ ನೆಲಕ್ಕೆ ಸಿಮೆಂಟ್ ಹಾಕಿಸಿದರು. ಆಮೇಲೆ ದಿ। ರಘುನಾಥ ರಾಯರು ೧೯೭೮ ರಿಂದ ೧೯೮೩ರ ತನಕ ನಾಗಪ್ಪಯ್ಯ ನವರ ಪರವಾಗಿಯೂ ಮುಂದೆ ಖಾಯಂ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದರು. ದಿ। ರಘುನಾಥ ರಾಯರ ಕಾಲದಲ್ಲಿ ರತ್ನಪಡಿ ಗೆ ಬೇಕಾದ ನಿತ್ಯಪೂಜಾ ನಿಧಿಯನ್ನು ಸ್ಥಾಪಿಸಿದರು. ೧೯೯೮ರ ಅವಧಿಯಲ್ಲಿ ದಿ। ಪುಂಡಲೀಕನವರು ಹಿರಿತನದ ಮೇರೆಗೆ ಆಡಳಿತ ಮೊಕ್ತೇಸರರಾದರು. ಇವರ ತರುವಾಯ ೧೬/೮/೧೯೯೯ ರಿಂದ ದಿ।ಶ್ರೀಪಾದರಾಯರು (ದಿ। ಲಕ್ಷ್ಮಯ್ಯನವರ ಮೊಮ್ಮಗ) ಆಡಳಿತ ಮೊಕ್ತೇಸರರಾದರು. ದಿ। ಶ್ರೀಪಾದರಾಯರು ತಮ್ಮ ಅನಾರೋಗ್ಯದ ನೆಲೆಯಲ್ಲಿ ದಿನಾಂಕ ೬/೧೧/೨೦೨೦ ರಂದು ತನ್ನ ಕಿರಿಯ ಸಹೋದರ ದಿ। ಕೆ. ಲಕ್ಷ್ಮೀನಾರಾಯಣ ರಾವ್ ಅವರಿಗೆ ಆಡಳಿತ ಮೊಕ್ತೇಸರ ಹುದ್ದೆಯನ್ನು ಹಸ್ತಾಂತರಗೊಳಿಸಿದರು. ತದನಂತರ ೭/೧೧/೨೦೧೦ ರಿಂದ ಶ್ರೀ ಲಕ್ಷ್ಮೀನಾರಾಯಣ ರಾವ್ ರವರು ೭/೧೦/೨೦೧೯ ರವರೆಗೆ ಮೊಕ್ತೇಸರಾಗಿದ್ದು, ಆಡಳಿತ ಮೊಕ್ತೇಸರರಾಗಿರುವಾಗಲೇ ಮೃತರಾಗಿದ್ದು ಅವರ ತರುವಾಯ ಅವರ ತಮ್ಮ ಶ್ರೀ ಕೆ. ವಿಶ್ವನಾಥ್ ರಾವ್ ಅವರು ಆಡಳಿತ ಮೊಕ್ತೇಸರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಪ್ರಸ್ತುತ ದೇಗುಲದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೆ. ವಿಶ್ವನಾಥ್ ರಾವ್ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ.

ಲಕ್ಷ್ಮಯ್ಯನವರ ಕಾಲಾನಂತರ ಅವರ ಸಹೋದರ ದಿ।ಸುಬ್ಬಣ್ಣಯ್ಯನವರು (೧೯೪೬ ರಿಂದ ೧೯೫೭ ರವರೆಗೆ) ಅಧಿಕಾರವನ್ನು ವಹಿಸಿಕೊಂಡರು. ಸುಬ್ಬಣ್ಣಯ್ಯನವರ ಕಾಲದಲ್ಲಿ ಅರ್ಚಕರ ವಾಸ್ತವ್ಯಕ್ಕೆ ಬೇರೆ ವಸತಿ ಸೌಕರ್ಯವನ್ನು ಮತ್ತು ಅರ್ಚಕರಿಗೆ ಪ್ರತ್ಯೇಕ ಬಾವಿಯನ್ನು ನಿರ್ಮಿಸಿದರು. ದಿ। ಬೈಕಾಡಿ ಶ್ರೀನಿವಾಸರಾಯರು ಶ್ರೀದೇವರಿಗೆ ಬೆಳ್ಳಿ ಮುಖವಾಡವನ್ನು ಅರ್ಪಿಸಿದರು. ಸುಬ್ಬಣ್ಣಯ್ಯನವರ ಕಾಲಾನಂತರ ಅವರ ಸಹೋದರ ದಿ। ನಾಗಪ್ಪಯ್ಯ (೧೯೫೧ ರಿಂದ ೧೯೬೩ ರವರೆಗೆ) ಆಡಳಿತ ಮೊಕ್ತೇಸರಾಗಿದ್ದರು. ಅವರ ಕಾಲದಲ್ಲಿ ದೇವಳದ ಮತ್ತು ಪೌಳಿಯ ಮಾಡಿನ ಹಂಚು ಬದಲಾಯಿಸಿ ದೇವಳಕ್ಕೆ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿಸಿದರು. ಮತ್ತು ದೇವಳದ ಎದುರಿನ ಬಾವಿಯನ್ನು ದುರಸ್ಥಿ ಪಡಿಸಿದರು. ಈ ಎಲ್ಲಾ ಕಾರ್ಯಗಳಿಗೆ ಅವರ ಸೋದರಳಿಯ ನಿವೃತ್ತ ಪೋಸ್ಟ್ ಮಾಸ್ಟರ್ ದಿ। ಲಕ್ಷ್ಮಯ್ಯನವರ ಸಹಕಾರ ಮತ್ತು ಉಳ್ಳವರ ಸಹಕಾರದಿಂದ ಮಾಡಿಸಿದರು. ಅಲ್ಲದೆ ನೆಲಕ್ಕೆ ಸಿಮೆಂಟ್ ಹಾಕಿಸಿದರು. ಆಮೇಲೆ ರಘುನಾಥರಾಯರು ೧೯೭೮ ರಿಂದ ೧೯೮೩ರ ತನಕ ನಾಗಪ್ಪಯ್ಯನವರ ಪರವಾಗಿಯೂ ಮುಂದೆ ಖಾಯಂ ಆಡಳಿತ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿದರು. ದಿ। ರಘುನಾಥರಾಯರ ಕಾಲದಲ್ಲಿ ರತ್ನಪಡಿಗೆ ಬೇಕಾದ ನಿತ್ಯಪೂಜಾನಿಧಿಯನ್ನು ಸ್ಥಾಪಿಸಿದರು.

೧೯೯೮ರ ಅವಧಿಯಲ್ಲಿ ದಿ। ಪುಂಡಲೀಕನವರು ಹಿರಿತನದ ಮೇರೆಗೆ ಆಡಳಿತ ಮೊಕ್ತೇಸರಾದರು. ಇವರ ತರುವಾಯ ೧೬/೦೮/೧೯೯೯ ರಿಂದ ಶ್ರೀಪಾದರಾಯರು (ದಿ। ಲಕ್ಷ್ಮಯ್ಯನವರ ಮೊಮ್ಮಗ) ಆಡಳಿತ ಮೊಕ್ತೇಸರರಾದರು. ಶ್ರೀಪಾದರಾಯರು ತಮ್ಮ ಅಸೌಖ್ಯದ ನೆಲೆಯಲ್ಲಿ ದಿನಾಂಕ ೬/೧೧/೨೦೧೦ರಂದು ತನ್ನ ಕಿರಿಯ ಸಹೋದರ ಕೆ. ಲಕ್ಷ್ಮೀನಾರಯಣ ರಾವ್ ಅವರಿಗೆ ಆಡಳಿತ ಮೊಕ್ತೇಸರ ಹುದ್ದೆಯನ್ನು ಹಸ್ತಾಂತರ ಗೊಳಿಸಿದರು. ನಂತರ ತಾ ೨೦/೦೮/೨೦೧೧ ರಂದು ಶ್ರೀಪಾದರಾಯರ ನಿಧನದ ನಂತರ ಅವರ ತಮ್ಮ ಶ್ರೀಲಕ್ಷ್ಮೀನಾರಾಯಣ ರಾವ್ ರವರು ಆಡಳಿತ ಮೊಕ್ತೇಸರರಾಗಿ ಕರ್ತವ್ಯ ನಿರ್ವಹಿಸಿದ್ದು ೨೫/೦೪/೨೦೧೬ ರಂದು ಬ್ರಹ್ಮಕಲಶವನ್ನು ನೆರವೇರಿಸಿದ್ದರು. ಶ್ರೀಲಕ್ಷ್ಮೀನಾರಾಯಣ ರಾವ್ ಅವರ ನಂತರ ಅವರ ತಮ್ಮ ಶ್ರೀ ಕೆ.ವಿಶ್ವನಾಥ್ ರಾವ್ ಅವರು ತಾ. ೭/೧೦/೨೦೧೯ ರಿಂದ ಆಡಳಿತ ಮೊಕೇಸರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಿವಂಗತ ಶ್ರೀಪಾದರಾಯರು ಅಧಿಕಾರ ವಹಿಸುವ ಸಂದರ್ಭದಲ್ಲಿ ಗರ್ಭಗುಡಿಯ ಶಿಖರ ವಾಲಿಕೊಂಡಿತ್ತು, ಗರ್ಭಗುಡಿಯ ಮಾಡು ಸೋರುತ್ತಿತ್ತು, ಪೌಳಿಯ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ಗರ್ಭಗುಡಿಗೆ ತಾಗಿಕೊಂಡಿದ್ದ ನಂದಿಯ ಗುಡಿಯ ಮರದ ಡಳಿಗಳು ಶಿಥಿಲಗೊಂಡು ಬಿದ್ದು ಹೋಗಿದ್ದವು. ದೇವಳದ ಖಾತೆಯಲ್ಲಿ ಹಣ ಇರಲಿಲ್ಲ, ಆ ಬಗ್ಗೆ ದೇವಸ್ಥಾನದಲ್ಲಿ ೧೯೯೬ರಲ್ಲಿ ಅಷ್ಟಮಂಗಳ ಪ್ರಶ್ನೆ ಹಾಗೂ ನಂತರ ೨೦೦೦ರಲ್ಲಿ ಆರೂಢ ಪ್ರಶ್ನೆಯನ್ನಿಟ್ಟು ವಿಚಾರಿಸಲಾಗಿ ಈ ಪರಿಸ್ಥಿತಿ ದೇವಳಕ್ಕೂ, ಗ್ರಾಮಕ್ಕು, ಭಕ್ತ ಸಮುದಾಯಕ್ಕೂ ಸರ್ವರೀತಿಯಲ್ಲೂ ಹಾನಿಕರವೆಂದು ಕಂಡುಬಂದ ಕಾರಣ ಭಕ್ತ ಬಾಂದವರು ಸೇರಿ ದೇವಳದ ಗರ್ಭಗುಡಿಯ ಮಾಡು, ಕಲಶ, ಪೀಠ, ಬಾವಿಯ ದುರಸ್ತಿ ತಾತ್ಕಾಲಿಕ ನೆಲೆಯಲ್ಲಿ ನೆರವೇರಿಸಿ ೫/೦೨/೨೦೦೧ ರಂದು ಶ್ರೀದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ನಡೆಸಲಾಯಿತು. ಮುಂದೆ ದಿನಾಂಕ ೧೦/೦೪/೨೦೦೨ ರಂದು ನಮ್ಮ ಪೂಜ್ಯ ಸ್ವಾಮೀಜಿಯವರಾದ ಶ್ರೀಶ್ರೀಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರಿ ಸ್ವಾಮೀಜಿ ಶ್ರೀಪರಾಶಕ್ತಿ ಕ್ಷೇತ್ರ ಮರಕಡ ಇವರು ದೇಗುಲದ ಅಭಿವೃದ್ಧಿಯ ಬಗ್ಗೆ ಇರುವ ಅಡೆತಡೆಗಳು ಹಾಗು ಅನೇಕ ದೋಷಗಳ ನಿವಾರಣೆ ಮಾಡಿರುತ್ತಾರೆ. ದಿನಾಂಕ ೧೧/೦೩/೨೦೦೩ ರಂದು ಪುನಃ ಆರೂಢ ಪ್ರಶ್ನೆಯನ್ನು ಇಟ್ಟಾಗ ಹಲವಾರು ದೋಷಗಳು, ಅಡೆತಡೆಗಳು ನಿವಾರಣೆಯಾಗಿರುವುದು ಸ್ಪಷ್ಟವಾಗಿರುತ್ತದೆ.

ಮುಂದೆ ದಿ। ಶ್ರೀಪಾದರಾಯರ ಕಿರಿಯ ಸಹೋದರ ಶ್ರೀ ಕೆ. ವಿಶ್ವನಾಥ್ ರಾವ್ ರವರು ಅಂತರಾಷ್ಟ್ರೀಯ ಖ್ಯಾತಿಸ್ತಪತಿ ಶ್ರೀ ದಕ್ಷಿಣಾಮೂರ್ತಿಯವರನ್ನು ದೇವಳಕ್ಕೆ ಕರೆಯಿಸಿ, ದೇವಳಕ್ಕೆ ಪೂರ್ಣಪ್ರಮಾಣದ ಜೀರ್ಣೋದ್ಧಾರದ ಅವಶ್ಯಕತೆಯನ್ನು ಮನಗಂಡು, ಕೆ. ವಿಶ್ವನಾಥ್ ರಾವ್ ಅವರು ಈ ಮಹತ್ ಕಾರ್ಯವನ್ನು ಕಗೆತ್ತಿಕೊಂಡು ಇದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಒದಗಿಸಿದಲ್ಲದೆ ಬಹಳ ಮುತುವರ್ಜಿಯಿಂದ ಅವರ ಮಾತೃಶ್ರೀ ರತ್ನಮ್ಮನವರ ಆಶೀರ್ವಾದ ಹಾಗೂ ತನ್ನ ಹಿರಿಯ ಸಹೋದರರಾದ ಕೆ. ಶ್ರೀಪಾದ ರಾವ್, ಕೆ. ಲಕ್ಷ್ಮಿನಾರಾಯಣ ರಾವ್ ಹಾಗೂ ಕಿರಿಯ ಸಹೋದರ ಕೆ. ಜಗದೀಶ ರಾವ್ ಅನುವಂಶಿಕ ಕುಟುಂಬದ ಇತರ ಸದಸ್ಯರನ್ನು ಭಕ್ತಜನರ ಸಹಭಾಗಿತ್ವದೊಂದಿಗೆ ನವನಿರ್ಮಾಣದ ಕಾರ್ಯಕ್ಕಾಗಿ ಸ್ಥಳೀಯ ಆಸುಪಾಸಿನ ಎಲ್ಲಾ ದೇವಸ್ಥಾನದ ಮೊಕ್ತೇಸರರನ್ನೆಲ್ಲಾ ತಾ. ೧೦/೧೧/೨೦೦೩ರಂದು ಆಹ್ವಾನಿಸಿ ಒಂದು ಮಹಾಸಭೆಯನ್ನು ಏರ್ಪಡಿಸಿದರು. ಈ ಸಭೆಯಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ.ಕೆ.ಪಾದ ರಾವ್ ಅವರ ಕುಟುಂಬದ ಹಿರಿಯ ವ್ಯಕ್ತಿಯಾದ ಶ್ರಿ.ಕೆ.ರವೀಂದ್ರನಾಥ್ ಅವರನ್ನು ಸಭೆಗೆ ಆಹ್ವಾನಿಸಿ ಅವರನ್ನು ಉಪಸ್ಥಿತರಿರುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ.ಕೆ.ರಮಾನಾಥ್ ರಾವ್ ಅವರು ದೇವಸ್ಥಾನದ ಇತಿಹಾಸವನ್ನು ನಿರೂಪಿಸಿದರು. ನಂತರ ಶ್ರೀ.ಕೆ.ಶ್ರೀಪಾದ ರಾವ್ ಅವರು ಪುರಾತನವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹತ್ವ ಹಾಗೂ ಶಿಥಿಲಾವಸ್ಥೆಗೆ ಬಂದ ದೇಗುಲವನ್ನು ಭಕ್ತಾದಿಗಳ ಸಹಕಾರದಿಂದ ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಗೊಳಿಸಿ ಪೂಜಾದಿ ವ್ಯವಸ್ಥೆಗಳಿಗೆ ಅನುವು ಮಾಡಿಕೊಟ್ಟದ್ದನ್ನು ಹೇಳಿದರಲ್ಲದೆ ದೇವಸ್ಥಾನಕ್ಕೆ ಸಂಪೂರ್ಣ ಜೀಣೋದ್ಧಾರ ಅವಶ್ಯಕತೆ ಇದ್ದರೂ ಆರ್ಥಿಕ ಅಡಚಣೆಗಳಿಂದಾಗಿ ನೆರವೇರಿಸಲಾಗದ್ದನ್ನು ಸಭೆಗೆ ತಿಳಿಸಿದರು. ಆ ಸಭೆಯಲ್ಲಿ ಶ್ರೀ.ಕೆ.ವಿಶ್ವನಾಥ್ ರಾವ್ ಅವರ ಸಲಹೆಗಳನ್ನು ಕೇಳಿದನ್ನು, ಗರ್ಭಗುಡಿಯ ಶಿಲ್ಪಿ ಸುಬ್ರಹ್ಮಣ್ಯದ ಮಹೇಶ ಮುನಿಯಂಗಳ,

ಜ್ಯೋತಿಷಿ ಶಿರೋಮಣಿ ರಾಮಕೃಷ್ಣ ಮಂಜರು, ವೇದಮೂರ್ತಿ ಋಷಿಕೇಶ ಬಾಯಿರಿ ಬಾರಕೂರು, ಪ್ರಾಶ್ನಿಕ ತಜ್ಞರ, ಎಮ್. ನರಸಿಂಹ ಸಾಮಗರು, ಕೆ. ಪದ್ಮನಾಭ ಅಡಿಗರ ಇವರೆಲ್ಲರನ್ನೂ ಬೇಟಿಯಾಗಿ ದೇಗುಲಕ್ಕೆ ಕರೆಯಿಸಿದಲ್ಲದೆ ಅವರೆಲ್ಲರ ಸಲಹೆಗಳನ್ನು ಕೇಳಿದುದನ್ನು ಹಾಗೂ ದೇಗುಲದ ಪುನರ್ ನಿರ್ಮಾಣದ ವೆಚ್ಚವನ್ನು ಸಭೆಗೆ ತಿಳಿಸಿದರು. ಆಗ ಸಭೆಯಲ್ಲಿ ಸೇರಿದ ಮಹನೀಯರೆಲ್ಲರೂ ಶ್ರೀ.ಕೆ.ವಿಶ್ವನಾಥ ರಾವ್ ಅವರನ್ನು ನೀವೇ ಈ ಪುನರ್ನಿರ್ಮಾಣ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಈ ಕೆಲಸವನ್ನು ನಡೆಸಿಕೊಡಬೇಕೆಂದು ಸರ್ವ ಮತದಿಂದ ಸಭಿಕರೆಲ್ಲರೂ ಕೇಳಿಕೊಂಡಾಗ ಶ್ರೀ.ಕೆ.ವಿಶ್ವನಾಥ ರಾವ್ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಜೀರ್ಣೋದ್ಧಾರ ಸಮಿತಿ ರಚಿಸಿ ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಾಗೂ ಭಕ್ತ ಜನರ ಸಹಭಾಗಿತ್ವದೊಂದಿಗೆ ನವ ನಿರ್ಮಾಣದ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಶಿಲಾಮಯ ಹಾಗೂ ಕಲಾ ಮಯವಾಗಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ನಿರ್ಮಿಸಿ, ದಿನಾಂಕ ೨೨/೦೪/೨೦೦೪ ಗುರುವಾರದಿಂದ ೨೮/೦೪/೨೦೦೪ರವರೆಗೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವುದರೊಂದಿಗೆ ಶ್ರಿ ಅಣ್ಣಾಜಿ ಬಲ್ಲಾಳ್, ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ, ಶ್ರೀ ಪೇಜಾವರ ಮಠಾದೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಇವರೆಲ್ಲರುಗಳ ದಿವ್ಯ ಆಶೀರ್ವಾದದೊಂದಿಗೆ ದೇವಳದ ಪುನಃ ಪ್ರತಿಷ್ಠೆ ಹಾಗು ಬ್ರಹ್ಮಕಲಶೋತ್ಸವವನ್ನು ಅತ್ಯಂತ ವೈಭವೋಪೇತವಾಗಿ ನೆರವೇರಿಸಿದರು.

ಈ ಎಲ್ಲಾ ಕಾರ್ಯಗಳಿಗೆ ಶ್ರೀ ಪರಾಶಕ್ತಿ ಕ್ಷೇತ್ರದ ಸ್ವಾಮೀಜಿ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿಯವರು ಹಾಗೂ ಶೃಂಗೇರಿ ಜಗದ್ಗುರುಗಳ ಸಲಹೆ ಸೂಚನೆಗಳನ್ನು ಪಡೆದುಕೊಂಡು ನೆರವೇರಿಸಲಾಯಿತು.

ಸದ್ರಿ ದೇವಳದ ಗರ್ಭಗುಡಿಯ ಬಲಭಾಗದಲ್ಲಿ ಶ್ರೀ ಸಂಕಷ್ಟಹರ ಗಣಪತಿ ಹಾಗೂ ಎಡಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ಹಾಗೂ ಪೂರ್ವ ಪೌಳಿಯಲ್ಲಿ ಶ್ರೀರಾಮ ಮಂದಿರವನ್ನು ಸ್ಥಾಪಿಸಲಾಗಿದೆ ಉತ್ತರಭಾಗದ ವಿಶಾಲ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ದೇವಳದ ಆಗ್ನೇಯ ಮತ್ತು ಈಶಾನ್ಯ ದಿಕ್ಕಿನಲ್ಲಿ ನಾಗಬನಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಇದರಿಂದಾಗಿ ಗ್ರಾಮಕ್ಕೆ ಭಜಕ ಬಾಂಧವರಿಗೆ, ಊರ ಪರಊರ ಭಕ್ತಾದಿಗಳಿಗೆ ಇದ್ದ ಶಾಪದೋಷ ನಿವಾರಿಸಲ್ಪಟ್ಟು, ದೇಗುಲವು ಎಲ್ಲಾ ಭಕ್ತರ ಶ್ರದ್ಧಾ ಕೇಂದ್ರವಾಗಿ ರೂಪುಗೊಂಡಿದೆ.